ವಿಟ್ಲ: ನವರಾತ್ರಿ ಮಹೋತ್ಸವದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ನೀರ್ಕಜೆ ನಾಟ್ಯ ನಿನಾದ ಕಲಾ ಶಾಲೆಯ ನೃತ್ಯ ನಿರ್ದೇಶಕಿ ಶ್ರೀಮತಿ ರಮ್ಯ ಪುನೀತ್ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು .

ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ , ಕೊಳಲಿನಲ್ಲಿ ವಿದ್ವಾನ್ ಕೃಷ್ಣ ಗೋಪಾಲ್ ಪುಂಜಾಲಕಟ್ಟೆ , ನಟುವಾಂಗದಲ್ಲಿ ಶ್ರೀಮತಿ ರಮ್ಯ ಪುನೀತ್ ಸಹಕರಿಸಿದರು.

