ಮೂಡಬಿದಿರೆ: ನಮ್ಮ ಜವನೆರ್ ಮಂಜನಕಟ್ಟೆ ಬೆಳುವಾಯಿ ಇದರ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟ (ಗ್ರಿಪ್) ಮಂಜನಕಟ್ಟೆ ಟ್ರೋಫಿ – 2025 ಅ.19ರಂದು ಬೆಳುವಾಯಿ ಹಡಿಂಜೆಗುತ್ತು ದಿ। ಲಕ್ಷ್ಮಣ್ ಡಿ ಶೆಟ್ಟಿ ವೇದಿಕೆ ಮುಂಭಾಗದಲ್ಲಿ ನಡೆಯಲಿದೆ.

ಬೆಳಿಗ್ಗೆ 08 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ತಂಡಗಳ ಪ್ರಬಲ ಆಟಗಾರರ ಮಿಶ್ರಿತ ತಂಡಗಳನ್ನು ಒಳಗೊಂಡ ಲೀಗ್ ಮಾದರಿಯ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ಆರಂಭವಾಗಲಿದೆ.

ಪುರುಷರ ಪಂದ್ಯಾಟ ವಿಜೇತರಿಗೆ ಪ್ರಥಮ – ರೂ.15,000 ಹಾಗೂ ಶಾಶ್ವತ ಫಲಕ
ದ್ವಿತೀಯ – ರೂ. 10,000 ಹಾಗೂ ಶಾಶ್ವತ ಫಲಕ
ತೃತೀಯ – ರೂ. 7,000 ಹಾಗೂ ಶಾಶ್ವತ ಫಲಕ
ಚತುರ್ಥ 5,000 ನಗದು ಬಹುಮಾನ ಹಾಗೂ ಶಾಶ್ವತ ಫಲಕ ಸಿಗಲಿದ್ದು ಮಹಿಳೆಯ ವಿಭಾಗದಲ್ಲಿ ಪ್ರಥಮ ನಗದು ಮತ್ತು ಶಾಶ್ವತ ಫಲಕ, ದ್ವಿತೀಯ – ನಗದು ಮತ್ತು ಶಾಶ್ವತ ಫಲಕ ಕೈಸೇರಲಿದೆ.
ಹೆಚ್ಚಿನ ಮಾಹಿತಿಗಾಗಿ: 9591083239, 9164651530, 6361461223, 9686318997




