ಕಾಸರಕೋಡು: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಕಾಸರಕೋಡುವಿನ ಕಾಂಞಂಗಾಡಿನ ಯುವ ಎಂಜಿನಿಯರ್ ಮೃತದೇಹ ಬೇಕಲ ಕೋಟೆಯ ಸಮೀಪ ತೃಕ್ಕನ್ನಾಡ್ ಸಮುದ್ರ ತೀರದಲ್ಲಿಅ. 4 ರಂದು ಪತ್ತೆಯಾಗಿದೆ.
ಮಗ ನಾಪತ್ತೆಯಾದ ಕುರಿತು ತಂದೆ ಯು.ಕೆ. ಜಯಪ್ರಕಾಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆಯ ಸಂದರ್ಭದಲ್ಲಿ ಪ್ರಣವ್‌ನ ಮೊಬೈಲ್ ಫೋನ್ ಮತ್ತು ಶೂಗಳು ಬೇಕಲ್ ಕೋಟೆಯ ಬಳಿ ಪತ್ತೆಯಾಗಿತ್ತು. ಜೊತೆಗೆ ಆತ್ಮಹತ್ಯೆ ಪತ್ರವೂ ಇತ್ತು. ಹೊಸದುರ್ಗ ಪೊಲೀಸರು ಮತ್ತು ಕರಾವಳಿ ಪೊಲೀಸರು ಹುಡುಕಾಟ ಮುಂದುವರಿಸುತ್ತಿದ್ದಂತೆ ಇದೀಗ ಶವ ಪತ್ತೆಯಾಗಿದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




