Breaking
23 Mar 2026, Mon

ಕೋಕಾ ಪ್ರಕರಣ: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಕೋಕಾ ಪ್ರಕರಣದಲ್ಲಿ ಬಾಗಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಯನ್ನು ಮೂಲ್ಕಿ ಚಿತ್ರಾವು ನಿವಾಸಿ ಶ್ರೀನಿವಾಸ್ ಶೆಟ್ಟಿ ಯಾನ ಶೀನು (45) ಎಂದು ಗುರುತಿಸಾಗಿದೆ.

ಕಳೆದ 8 ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದು ಇವನು ಭೂಗತ ಪಾತಕಿ ಕಲಿ ಯೋಗೀಶ್ ಸಹಚಾರನಾಗಿದ್ದನು. ಈತನ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು ವಾರೆಂಟ್ ಹೊರಡಿಸಿತ್ತು.

ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಬಿ.ಎಸ್. ಪೊಲೀಸ್ ಉಪ ನಿರೀಕ್ಷಕ ಉಮೇಶ್ ಕುಮಾ‌ರ್ ನೇತೃತ್ವದಲ್ಲಿ ಎಎಸ್‌ಐ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ಅವರು ಸೇರಿದಂತೆ ಒಂದು ತಂಡವನ್ನು ರಚಿಸಿ ಖಚಿತ ಮಾಹಿತಿ ಮೇರೆಗೆ ಅ.04 ರಂದು ಮುಂಬೈಯಲ್ಲಿ ಆರೋಪಿಯನ್ನು ಬಂಧಿಸಿಲಾಗಿದೆ.

Leave a Reply

Your email address will not be published. Required fields are marked *