Breaking
23 Mar 2026, Mon

ದಾಸಕೋಡಿ: ಬೈಕ್‌ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿದ ಕಳ್ಳ

ಬಂಟ್ವಾಳ: ಬಂಟ್ವಾಳದ ದಾಸಕೋಡಿಯಲ್ಲಿ ಬೈಕ್‌ನಲ್ಲಿ ಬಂದ ಕಳ್ಳ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕದ್ದೊಯ್ದ ಘಟನೆ ಅ.04 ರಂದು ನಡೆದಿದೆ.

ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿ ಸರಸ್ವತಿ ಅವರು ಕಲ್ಲಡ್ಕ ಪೇಟೆಗೆ ತೆರಳಿ, ದಾಸಕೋಡಿ ಪೆಟ್ರೋಲ್ ಪಂಪ್ ನ ಬಳಿ ಇಳಿದು ಮನೆ ಕಡೆಗೆ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಕಳ್ಳ 2 ಪವನ್‌ ತೂಕದ ಚಿನ್ನದ ಸರವನ್ನು ಎಳೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.

ಕಳವುಗೈಯಲಾದ ಚಿನ್ನದ ಸರದ ಮೌಲ್ಯ ಸುಮಾರು ಎರಡು ಲಕ್ಷ ಎಂದು ಅಂದಾಜಿಸಲಾಗಿದೆ.ಈ ಕುರಿತು ಸರಸ್ವತಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *