ಬೆಳ್ತಂಗಡಿ: ರಸ್ತೆಯಲ್ಲಿ ಕಳೆದುಕೊಂಡಿದ್ದ ರೂ. 6 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ವಾರಸುದಾರರಿಗೆ ಹಸ್ತಾoತರಿಸಿ ಜಯಂತ್ ಶೆಟ್ಟಿ ಹಕ್ಕೇರಿ ಅವರು ಮಾನವೀಯತೆ ಮೆರೆದಿದ್ದಾರೆ.

ಆರಂಬೋಡಿ ಗ್ರಾಮದ ಹರಿಣಾಕ್ಷಿ ಅವರು ತಾಯಿ ಮನೆಯಿಂದ ಅಳದಂಗಡಿಯಲ್ಲಿರುವ ಗಂಡನ ಮನೆಗೆ ಆಟೋ ರಿಕ್ಷಾದಲ್ಲಿ ಹೋಗುವಾಗ ರೂ. 6 ಲಕ್ಷ ಚಿನ್ನಯಿದ್ದ ಬ್ಯಾಗ್ ಕಳೆದುಕೊಂಡಿದ್ದರು. ಈ ಬ್ಯಾಗ್ ಅಂಗರಕರಿಯ ರಸ್ತೆಯಲ್ಲಿ ಜಯಂತ್ ಶೆಟ್ಟಿ ಹಕ್ಕೇರಿ ಇವರಿಗೆ ಸಿಕ್ಕಿದ್ದು ಕೂಡಲೇ ಹರಿಣಾಕ್ಷಿ ಇವರ ಗಂಡನಾದ ವಿಶ್ವನಾಥ್ ಬಂಗೇರ ಅಳದಂಗಡಿ ಅವರನ್ನು ಸಂಪರ್ಕಿಸಿ ಬ್ಯಾಗನ್ನು ಹಸ್ತಾಂತರಿಸಿದ್ದಾರೆ.

ಈ ವೇಳೆ ಇವರಿಗೆ ಆರಂಬೋಡಿ ಗ್ರಾಮದ ಪ್ರದೀಪ್ ಪಾಣಿಮೇರು, ಜಯಂತ್ ದೇಲೋಡಿ, ರಾಜೇಶ್ ಹುಲಿಮೇರು, ರಿಕ್ಷಾ ಚಾಲಕ ಯತೀಶ್ ಪಾಡ್ಯರು ಸಹಕಾರ ನೀಡಿದ್ದಾರೆ.




