ಸುಳ್ಯ: ಅಜ್ಜಿ ಮನೆಗೆ ಹೋಗುತ್ತೇನೆಂದು ಹೇಳಿ ಹೋದ ಯುವತಿಯೊಬ್ಬಳು ತನ್ನ ಅಜ್ಜಿಯ ಮನೆಗೆ ಹೋಗದೇ ಮನೆಗೂ ಬಾರದೇ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ನಾಸಿಯಾ (18) ಎಂದು ಗುರುತಿಸಲಾಗಿದೆ.

ಮಗಳ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಮಗಳ ಸ್ನೇಹಿತೆಯರಲ್ಲಿ ವಿಚಾರಿಸಿದಾಗ, ಹುಡುಕಿದಾಗ ಯಾವುದೇ ಪೂರಕವಾದ ಮಾಹಿತಿ ಲಭ್ಯವಾಗಿರುವುದಿಲ್ಲ. ಅದುದ್ದರಿಂದ ಕಾಣೆಯಾಗಿರುವ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಸುಳ್ಯ ಪೊಲೀಸ್ ಠಾಣಾಧಿಕಾರಿಯವರಿಗೆ ವಿನಂತಿಸಿಕೊಳ್ಳುತ್ತೇನೆ ಎಂದು ನಾಪತ್ತೆಯಾದ ಯುವತಿಯ ತಾಯಿ ತಾಹಿರ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

ನಾಸಿಯಾ (18)ರವರು 5.5 ಅಡಿ ಎತ್ತರವಿದ್ದು, ಕೆಂಪು-ಬಿಳಿ ಮೈ ಬಣ್ಣ ಹೊಂದಿದ್ದು, ಗಿಳಿ ಪಚ್ಚೆ ಬಣ್ಣದ ಗೌನ್ (ಮೇಲ್ಭಾಗ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾಳೆ) ಕನ್ನಡ, ಮಳಿಯಾಳಂ ಭಾಷೆ ಮಾತನಾಡುತ್ತಾಳೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.




