Breaking
22 Mar 2026, Sun

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಅಚೀವರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಎರಡೂವರೆ ವರ್ಷದ ಮೋಶ್ವಿ.ಪಿ

ಬೆಳ್ತಂಗಡಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ ಎರಡೂವರೆ ವರ್ಷದ ಮೋಶ್ವಿ.ಪಿ ಐಬಿಆರ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಮಗು 10 ಅನ್ವೇಷಕರನ್ನು, 13 ಸ್ವಾತಂತ್ರ್ಯ ಹೋರಾಟಗಾರರು, 26 ವಾಹನಗಳು, 18 ಪಕ್ಷಿಗಳು, 10 ಆಕಾಶ ವಸ್ತುಗಳು, 7 ವೃತ್ತಿ, 17 ದೇಶೀಯ ಪ್ರಾಣಿ, 12 ಕೀಟ, 12 ಕಾಡು ಪ್ರಾಣಿ, 76 ಇತರ ವಸ್ತುಗಳು, 26 ತರಕಾರಿ, 22 ಪಕ್ಷಿ, 10 ಕೆಲಸ, 18 ಹೂವು, 12 ಹಣ್ಣು, ವರ್ಣಮಾಲೆಯ ಅಕ್ಷರಗಳು, 1ರಿಂದ 10ರವರೆಗೆ ಎಣಿಕೆ, 15 ಜೀವಿಗಳ ಧ್ವನಿಗಳ ಅನುಕರಣೆ ಹಾಗೂ 11 ರಾಷ್ಟ್ರೀಯ ಚಿಹ್ನೆಗಳನ್ನು ಎರಡೂವರೆ ವರ್ಷದಲ್ಲಿಯೇ ಗುರುತಿಸಿರುವುದನ್ನು ಪರಿಗಣಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ಪ್ರಶಸ್ತಿ ನೀಡಲಾಗಿದೆ.

ಇವರು ಲಾಯಿಲಾ ಗ್ರಾಮದ ಪಿಹೆಚ್‌ಡಿ ಪದವೀಧರ ಪ್ರತೀಕ್ (ಐಐಟಿ ಬಾಂಬೆಯಲ್ಲಿ ಸಂಶೋಧನಾ ವೃತ್ತಿ) ಹಾಗೂ ಉಪನ್ಯಾಸಕಿ ತೇಜಸ್ವಿನಿ ದಂಪತಿಯ ಪುತ್ರಿ.

Leave a Reply

Your email address will not be published. Required fields are marked *