Breaking
19 Sep 2026, Sat

ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿ

ಸುಳ್ಯ: ತಾಲೂಕಿನ ಕೊಡಿಯಾಲದಲ್ಲಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿ ನಡೆಸಿದ ಘಟನೆ ಅ.03 ರಂದು ನಡೆದಿದೆ.

ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಕೊಡಿಯಾಲದ ನಿದ್ಮಾರು ಎಂಬಲ್ಲಿನ ಮನೆಗೆ ಸಮೀಕ್ಷೆಗಾಗಿ ತೆರಳಿದ ಶಿಕ್ಷಕಿಯ ಮೇಲೆ ನಾಯಿ ದಾಳಿ ನಡೆಸಿದೆ. ದಾಳಿಯಿಂದ ಶಿಕ್ಷಕಿಯ ಉಡುಪು ಹರಿದು ಹೋಗಿದ್ದು ತಕ್ಷಣವೇ ಅವರು ಬ್ಯಾಗ್‌ ಅಡ್ಡ ಹಿಡಿದುಕೊಂಡಿದ್ದಾರೆ. ಬಳಿಕ ಮನೆಯವರು ಬಂದು ನಾಯಿಯನ್ನು ಹಿಡಿದುಕೊಂಡಿದ್ದಾರೆ.

ಈ ಘಟನೆಯಿಂದ ಭಯಭೀತರಾದ ಶಿಕ್ಷಕಿ ಸಮೀಕ್ಷೆ ಮುಂದುವರಿಸಲಾಗದೇ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *