Breaking
24 Dec 2024, Tue

ದೇವರಾಜ ಅರಸು ಸೇರಿ ಎಲ್ಲಾ ಸಿಎಂಗಳ ಮೇಲೂ ಆಪಾದನೆ ಬಂದಿತ್ತು, ಸಿದ್ದರಾಮಯ್ಯನವರೇ ದೃತಿಗೆಡಬೇಡಿ: ಪಿಜಿಆರ್ ಸಿಂಧ್ಯಾ

ಬೆಂಗಳೂರು: ಸಿದ್ದರಾಮಯ್ಯನವರೇ ನೀವು ದೃತಿಗೆಡಬೇಡಿ. ಎಲ್ಲಾ ಮುಖ್ಯಮಂತ್ರಿಗಳ ಮೇಲೂ ಆಪಾದನೆ ಬಂದಿತ್ತು. ದೇವರಾಜು ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಎಲ್ಲರ ಮೇಲೂ ಆರೋಪ ಬಂದಿತ್ತು. ಆಪಾದನೆ ಮಾಡುವುದೇ ಕೆಲವರ ಕೆಲಸ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.

ಅರಮನೆ ರಸ್ತೆಯ ಸ್ಕೌಟ್ಸ್ & ಗೈಡ್ಸ್ ಸಭಾಂಗಣದಲ್ಲಿ ನಡೆದ ಬರಹಗಾರ ವಿ.ಎಸ್. ಉಗ್ರಪ್ಪ ಅವರ ʻಸಮರ್ಥ ಜನನಾಯಕʼಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ವೇಳೆ, ಸಿದ್ದರಾಮಯ್ಯರನ್ನು ಏನು ಮಾಡುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ಕಾಂಗ್ರೆಸ್ ಪಕ್ಷ ಇದೆ. ಕಾಂಗ್ರೆಸ್ ನಾಯಕರು, ಅಧ್ಯಕ್ಷರು ಇದ್ದಾರೆ. ಡಿ.ಕೆ.ಶಿವಕುಮಾರ್ ಇದ್ದಾರೆ. ಅವರು ನಿಜವಾಗಿಯೂ ಕಲ್ಲು ಬಂಡೆನೇ. ಆ ಕಲ್ಲು ಬಂಡೆ ನಿಮ್ಮ ಜೊತೆಗಿದೆ, ಹೆದರಬೇಡಿ ಎಂದಿದ್ದಾರೆ. 1978 ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದರು. ಅವರು ಸಿದ್ದರಾಮಯ್ಯನವರಂತೆ ಪ್ರಖ್ಯಾತಿ ಪಡೆದ ನಾಯಕರಾಗಿದ್ದರು. ದೇವರಾಜ್ ಅರಸು ಕಾಂಗ್ರೆಸ್‌ನ್ನು ಗೆಲ್ಲಿಸಿದ್ದಷ್ಟೇ ಅಲ್ಲ, ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದರು. ಇವತ್ತು ಸಿದ್ದರಾಮಯ್ಯ 5 ಗ್ಯಾರಂಟಿ ತಂದಂತೆ ಅವತ್ತು ದೇವರಾಜ ಅರಸು 20 ಅಂಶದ ಕಾರ್ಯಕ್ರಮಗಳನ್ನು ತಂದರು. ಅರಸು ಅವರ ವಿರುದ್ಧ ಅಂದು ಸುಪ್ರಿಂ ಕೋರ್ಟ್ ನ್ಯಾಯಮೂತಿಗಳ ಮೂಲಕ ತನಿಖೆ ನಡೆಸಿ ಅವರನ್ನು ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದ್ದರು. ಆದರೂ ಜನ ಅವರನ್ನ ಕೈ ಬಿಡಲಿಲ್ಲ. ಇದು ಈಗಿನ ಬೆಳವಣಿಗೆಗೂ ಸಾಮ್ಯತೆ ಇದೆ. ಅಂದು ಕಾಂಗ್ರೆಸ್ ನಾಯಕರೆ ಅರಸು ವಿರುದ್ಧ ಹೈ ಕಮಾಂಡ್ ನಾಯಕರಿಗೆ ದೂರು ನೀಡುತ್ತಿದ್ದರು ಎಂದಿದ್ದಾರೆ.

Leave a Reply

Your email address will not be published. Required fields are marked *