ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಮಾಜ ಸೇವಕ ಉಜಿರೆ ಕುಂಟಿನಿ ನಿವಾಸಿ ಖತಾರ್ ಮುಹಮ್ಮದ್ ಕುಂಞಿ ನಿಧನ

ಉಜಿರೆ: ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಮಾಜ ಸೇವಕ ಅವರು ಉಜಿರೆ ಕುಂಟಿನಿ ನಿವಾಸಿ ಖತಾರ್ ಮುಹಮ್ಮದ್ ಕುಂಞಿ (67) ಅವರು ನಿಧನ ಹೊಂದಿದ್ದಾರೆ.

ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷದ ತಾಲೂಕು ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಸೇವೆಯಲ್ಲಿದ್ದರು. ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಇದರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

ಸಮಾಜ ಸೇವಕರಾಗಿದ್ದ ಅವರು ಖತಾರ್ ಮುಸ್ಲಿಂ ಅಸೋಸಿಯೇಷನ್ ಸಂಘಟನೆಯ ಹೆಸರಿನಲ್ಲಿ ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆಯಾಗಿ ನೀಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದರು. ಅಲ್ಲದೆ ತಾಲೂಕಿನ ಮಸೀದಿ ಮತ್ತು ಮದರಸಗಳಿಗೆ ಸಹಾಯ ಒದಗಿಸಿಕೊಟ್ಟಿದ್ದರು.

ಗ್ರಾ.ಪಂ ಸದಸ್ಯರಾಗಿ ಅವರು ಮುಂದಿನ ತಿಂಗಳಿಗೆ 50 ವರ್ಷ ತುಂಬಿದ ಬಗ್ಗೆ ಕಾರ್ಯಕ್ರಮ ನಡೆಸುವ ಇರಾದೆಯಲ್ಲಿದ್ದರು. ಮೃತರು ಪತ್ನಿ ಖತೀಜಮ್ಮ ಮತ್ತು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *