Breaking
29 Jun 2026, Mon

ಶ್ರೀಕೃಷ್ಣ ರಾವ್ ಮದುವೆ ಆಗುವುದಿಲ್ಲ ಅಂತ ಹೇಳಿದ್ರೆ ಅವನನ್ನು ಸುಮ್ನೆ ಬಿಡಲ್ಲ – ಪ್ರತಿಭಾ ಕುಳಾಯಿ ಗುಡುಗು

ಮಂಗಳೂರು: ಹೆಣ್ಣುಮಗಳ ಪ್ರಕರಣದಲ್ಲಿ ತುಟಿ ಬಿಚ್ಚದ ಎಲ್ಲ ಪಕ್ಷದ ರಾಜಕಾರಣಿಗಳೂ ನೀಚರೇ. ಆರೋಪಿ ಶ್ರೀಕೃಷ್ಣ ರಾವ್ ಮದುವೆ ಆಗುವುದಿಲ್ಲ ಅಂತ ಹೇಳಿದ್ರೆ ಅವನನ್ನು ಸುಮ್ನೆ ಬಿಡಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ.

ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸಿ ವಂಚಿಸಿದ ಪ್ರಕರಣದ ಡಿಎನ್‌ಎ ವರದಿ ಬಂದಿದ್ದು, ಯುವತಿ ಆಪಾದಿಸಿದ ಯುವಕನ ಡಿಎನ್‌ಎ ಎಂದು ಸಾಬೀತಾಗಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಯಾರೂ ಯಾಕೆ ಮಾತಾಡ್ತಿಲ್ಲ, ಹಾಗಾಗಿ ಎಲ್ಲರೂ ನೀಚರೇ!.

“ಭಾಷಣದಲ್ಲಿ ಹಿಂದೂಗಳು ಹತ್ತು ಮಕ್ಕಳು ಹುಟ್ಟಿಸಿ ಎನ್ನುತ್ತಾರೆ, ಆದರೆ ಈಗ ಒಂದು ಮಗುವಿಗೆ ನ್ಯಾಯ ಕೊಡಲು ಆಗುತ್ತಿಲ್ಲ. ನಮ್ಮ ಸಮಾಜದಲ್ಲಿ ಯಾರೂ ಗಂಡಸರಿಲ್ವಾ ಎಂದು ಪ್ರತಿಭಾ ಪ್ರಶ್ನಿಸಿದ್ದಾರೆ. ಮದುವೆ ಆಗುವ ತನಕ ಅವನ ಮನೆಯಲ್ಲೇ ಪ್ರತಿಭಟನೆ ಮಾಡ್ತೇವೆ. ನೀವಿದನ್ನು ಬೆದರಿಕೆ ಅಂತ ಬೇಕಾದ್ರೂ ತಿಳಿಯಿರಿ ಕೇಸ್ ಹಾಕಿದ್ರೂ ಕೇರ್ ಮಾಡಲ್ಲ. ಒಬ್ಬಳು ಮಹಿಳೆಯಾಗಿ ಹೇಗೆ ಮದುವೆ ಮಾಡಿ ಕೊಡಿಸುತ್ತೇನೆ ಎಂದು ತೋರಿಸಿಕೊಡುತ್ತೇನೆ. ಅಮಾಯಕ ಯುವತಿಗೆ ನ್ಯಾಯ ದೊರಕಿಸಿಕೊಡುವುದೇ ನಮ್ಮ ಉದ್ದೇಶ ಎಂದು ಗುಡುಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸಂತ್ರಸ್ತೆ ತಾಯಿ ನಮಿತಾ, ಆಚಾರ್ಯ ಸಮುದಾಯದ ಮುಖಂಡೆ ಅರ್ಚನಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *