ಸುರತ್ಕಲ್: ಯಾವುದೇ ಪರವಾನಗಿ ಇಲ್ಲದೆ ದನ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುರತ್ಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಕಂಪಾಡಿಯ ಅಂಗಾರಗುಂಡಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ (42) ಎಂದು ಗುರುತಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಕಾಟಿಪಳ್ಳದ ಇಮ್ತಿಯಾಜ್ ಹಾಗೂ ಪಡುಬಿದ್ರೆಯ ಅಬ್ಬಾಸ್ ಗುಡ್ಡೆ ತಲೆಮರೆಸಿದ್ದಾರೆ. ಆರೋಫಿಗಳು ಫ್ರೀಜರ್ನಲ್ಲಿರಿಸಿದ್ದ 42 ಕೆ.ಜಿ. ದನ ಮಾಂಸ, ಮಾರಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ರೂ. 1,42,500/- ನಗದು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರಾಸದ ಮಿಥುನ್ ಹೆಚ್.ಎನ್. ಐಪಿಎಸ್ ಮತ್ತು ರವಿಶಂಕರ್ ಅವರ ನಿರ್ದೇಶನದಲ್ಲಿ, ಸುರತ್ಕಲ್ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ, ಪಿಎಸ್ಐಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ದನ ನಾಯ್ಕ್, ಶಶಿಧರ ಶೆಟ್ಟಿ, ಹಾಗೂ ಸಿಬ್ಬಂದಿ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಕಾರ್ತಿಕ್, ಓಂಪ್ರಕಾಶ್ ಬಿಂಗಿ, ಸಂಜೀವ್ ಕುಮಾರ್, ಮಂಜುನಾಥ ಆಯಟ್ಟಿ ಮತ್ತು ನಾಗರಾಜ್ ಪಾಲ್ಗೊಂಡಿದ್ದರು.



