Breaking
6 Aug 2026, Thu

ಬಟ್ಟೆ ಖರೀದಿ ನೆಪದಲ್ಲಿ ಚಿನ್ನ ಕಳವು: ಒಂದು ವರ್ಷದ ಬಳಿಕ ಮಹಿಳೆಯರ ಗ್ಯಾಂಗ್ ಪೊಲೀಸ್‌ ವಶಕ್ಕೆ

ಚಿಕ್ಕಬಳ್ಳಾಪುರ: ಬಟ್ಟೆ ಖರೀದಿ ನೆಪದಲ್ಲಿ ಬಂದು, ಚಿನ್ನ ಕದ್ದು ಪರಾರಿಯಾಗಿದ್ದ ಬುರ್ಖಾ ಧರಿಸಿದ್ದ ಮಹಿಳೆಯರ ಗ್ಯಾಂಗ್ ವೊಂದನ್ನು ಚಿಂತಾಮಣಿ ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಸೌಂದರ್ಯ ಫ್ಯಾಷನ್‌ ಆ್ಯಂಡ್ ಜ್ಯುವೆಲ್ಲರ್ಸ್‌ ಅಂಗಡಿಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಳ್ಳತನ ನಡೆದಿದ್ದು, ಸದ್ಯ ಕೃತ್ಯ ನಡೆದ ವರ್ಷದ ನಂತರ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಈ ಬಗ್ಗೆ ಜ್ಯುವೆಲ್ಲರ್ಸ್‌ ಮಾಲೀಕರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಚಿಂತಾಮಣಿ ನಗರ ಪೊಲೀಸರು, ಒಂದು ವರ್ಷದ ಬಳಿಕ ಮಾಲುಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *