Breaking
22 Mar 2026, Sun

ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದು ಆಭರಣ ದೋಚಿದ ದಂಪತಿ

ಉತ್ತರ ಪ್ರದೇಶ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದಿದ್ದ ದಂಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಕಳವು ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ.

ಈ ದಂಪತಿ ಗ್ರಾಹಕರಂತೆ ಚಿನ್ನದಂಗಡಿಗೆ ಬಂದಿದ್ದು, ಅಂಗಡಿಯವರು ಅವರಿಗೆ ವಿವಿಧ ಆಭರಣವನ್ನು ತೋರಿಸಿದ್ದಾರೆ. ಎರಡ್ಮೂರು ಡಿಸೈನ್‌ಗಳನ್ನು ಮಹಿಳೆ ನೋಡಿದ್ದಾರೆ. ಬಳಿಕ ಮೆಲ್ಲಗೆ ಒಂದು ನೆಕ್ಲೆಸ್ ಸೀರೆಯ ಕೆಳಗೆ ಹಿಡಿದುಕೊಂಡು, ಶಾಪ್‌ನಿಂದ ಹೊರ ನಡೆದಿದ್ದಾರೆ.

ಸ್ಟಾಕ್ ಪರಿಶೀಲನೆಯ ಸಮಯದಲ್ಲಿ 6 ಲಕ್ಷ ರೂ. ಮೌಲ್ಯದ ಆರು ಗ್ರಾಂ ಚಿನ್ನ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆ ಚಿನ್ನದ ಹಾರವನ್ನು ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ.

Leave a Reply

Your email address will not be published. Required fields are marked *