Breaking
21 Jun 2026, Sun

ಬಾಲಿವುಡ್ ನ ವಿಶಾಲ್ ಬ್ರಹ್ಮ ನ ಬಂಧನ

ಚೆನ್ನೈ: ಮಾದಕ ವಸ್ತುಗಳೊಂದಿಗೆ ಬಾಲಿವುಡ್ ನಟರೊಬ್ಬರು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಬಾಲಿವುಡ್ ನ ವಿಶಾಲ್ ಬ್ರಹ್ಮ (32) ಬಂಧಿತ ನಟನಾಗಿದ್ದಾನೆ. ಸೆ.29 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ಮೆಥಾಕ್ವಾಲೋನ್ ಎಂಬ ಮಾದಕ ವಸ್ತುದೊಂದಿಗೆ ವಿಶಾಲ್ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ಸಾಂ ಮೂಲದ ವಿಶಾಲ್ ಅವರು ಸಿಂಗಾಪುರದಿAದ AI 347 ವಿಮಾನದಲ್ಲಿ ಚೆನ್ನೈಗೆ ಹಿಂತಿರುಗಿದ್ದರು. ಆಗ ಕಂದಾಯ ಗುಪ್ತಚರ ನಿರ್ದೇಶನಾಲಯವು ಅವರನ್ನು ಅಕ್ರಮ ವಸ್ತುಗಳ ಸಹಿತ ತಡೆದು ಬಂಧಿಸಿದೆ.

Leave a Reply

Your email address will not be published. Required fields are marked *