Breaking
25 Sep 2026, Fri

ಕಳವುಗೈದ ಕಾರಿನಲ್ಲಿ ಬಾಲಕನನ್ನು ಅಪಹರಣಗೈಯ್ಯಲು ಯತ್ನ; ಆರೋಪಿ ಪೊಲೀಸ್‌ ವಶಕ್ಕೆ

ಕಾಸರಗೋಡು : ಕಳವುಗೈದ ಕಾರಿನಲ್ಲಿ 12 ವರ್ಷದ ಬಾಲಕನನ್ನು ಅಪಹರಣಗೈಯ್ಯಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕೋಜಿಕ್ಕೋಡು ‌ಪಯ್ಯಾನಿಕಲ್ ನಲ್ಲಿ ಸೆ. 30ರಂದು ನಡೆದಿದೆ.

ಬಂಧಿತ ಆರೋಪಿಯನ್ನು ಕಾಸರಗೋಡು ನಿವಾಸಿ ಸಿನಾನ್ ಅಲಿ ಯೂಸುಫ್(33) ಎಂದು ಗುರುತಿಸಲಾಗಿದೆ.

ಬೀಚ್ ಆಸ್ಪತ್ರೆ ಬಳಿ ಟ್ಯಾಕ್ಸಿ ಸ್ಟಾಂಡ್ ಬಳಿಯಿಂದ ಈತ ಕಾರು ಕಳವುಗೈದಿದ್ದು, ಬಳಿಕ ಮದ್ರಸ ಬಿಟ್ಟು ಮನೆಗೆ ಬರುತ್ತಿದ್ದ ಬಾಲಕನನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸಿದ್ದಾನೆ. ಬಾಲಕನ ಕೈ ಹಿಡಿದೆಳೆದರೂ ಕಾರಿಗೆ ಹತ್ತದೆ ನಿಂತಿದ್ದಾಗ ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದಿಟ್ಟು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *