Breaking
25 Sep 2026, Fri

ಕಳೆದುಕೊಂಡಿದ್ದ ಚಿನ್ನವನ್ನು ವಾರಿಸುದಾರರಿಗೆ ಮರಳಿಸಿದ ನೇತ್ರಾವತಿಯಲ್ಲಿರುವ ಪಾರಿಜಾತ ಲಾಡ್ಜ್ ನ ಸಿಬ್ಬಂದಿ

ಧರ್ಮಸ್ಥಳ: ಲಾಡ್ಜ್ ನಲ್ಲಿ ರೂಂ ಮಾಡಿದ್ದ ದಂಪತಿಗಳು ಕಳೆದುಕೊಂಡಿದ್ದ ಚಿನ್ನವನ್ನು ಲಾಡ್ಜ್ ಸಿಬ್ಬಂದಿ ಹುಡುಕಿ ಮತ್ತೆ ವಾರಿಸುದಾರರಿಗೆ ಮರಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಲಾಡ್ಜ್ ನಲ್ಲಿ ನಡೆದಿದೆ.

ನೇತ್ರಾವತಿಯಲ್ಲಿರುವ ಅಖಿಲ್ ಶೆಟ್ಟಿ ಮಾಲಕತ್ವದ ಪಾರಿಜಾತ ಹೆಸರಿನ ಲಾಡ್ಜ್ ನ ಸಿಬ್ಬಂದಿಗಳೇ ಚಿನ್ನವನ್ನು ಮರಳಿ ವಾರಿಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಂಧ್ರಪ್ರದೇಶ ಮೂಲದ ಶಿವಕುಮಾರ್ ಮತ್ತು ಆತನ ಪತ್ನಿ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯಕ್ಕೆ ಹೋಗಲು ಗೆ ಸೆ.29 ರಂದು ರೂಂ ಬುಕ್ ಮಾಡಿ ಉಳಿದುಕೊಂಡಿದ್ದರು.

ಆದ್ರೆ ಸೆ.30 ರಂದು ರೂಂ ಚೆಕ್ ಓಟ್ ಮಾಡುವಾಗ ಶಿವಕುಮಾರ್ ಪತ್ನಿ 20 ಗ್ರಾಂ ತೂಕದ ಚಿನ್ನವನ್ನು ರೂಂ ನಲ್ಲಿ ಕಳೆದುಕೊಂಡಿದ್ದಾರೆ. ಯಾವ ಕಡೆ ಹುಡುಕಾಟ ನಡೆಸಿದ್ರೂ ಚಿನ್ನ ಪತ್ತೆಯಾಗಿರಲಿಲ್ಲ ಕೊನೆಗೆ ಚಿನ್ನವನ್ನು ಹುಡುಕಿ ವಾಪಸ್ ಕೊಡುವ ಜವಾಬ್ದಾರಿ ನಮ್ಮದು ಎಂದು ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ದಂಪತಿಗಳಿಗೆ ಭರವಸೆ ನೀಡಿ ಕಳುಹಿಸಿದ್ದರು.

ದಂಪತಿಗಳು ತಂಗಿದ್ದ ರೂಂ ಸಿಬ್ಬಂದಿಗಳು ಎಲ್ಲಾ ಕಡೆ ಹುಡುಕಾಟ ಮಾಡಿದ್ದರೂ ಪತ್ತೆಯಾಗದಿದ್ದಾಗ ಕೊನೆಗೆ ಯಾರಿಗೂ ರೂಂ ನೀಡದೆ ಲಾಕ್ ಮಾಡಿ ಇಟ್ಟಿದ್ದರು. ದಂಪತಿಗಳು ಉಪಯೋಗಿಸಿದ್ದ ಬೆಡ್ ಶೀಟ್ ಮತ್ತು ದಿಂಬು ಕವರ್ ಗಳನ್ನು ವಾಶ್ ಮಾಡಲು ಕಳುಹಿಸಿದ್ದರು.

ಅ.1 ರಂದು ವಾಶ್ ಮಾಡಲು ಕಳುಹಿಸಿದ್ದ ದಿಂಬು ಕವರ್ ಒಳಗೆ ಚಿನ್ನ ಇರುವುದನ್ನು ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ. ತಕ್ಷಣ ಕರೆಮಾಡಿ ದಂಪತಿಗಳನ್ನು ಲಾಡ್ಜ್ ಗೆ ಕರೆಸಿ ವಿಚಾರ ಹೇಳಿದಾಗ ರಾತ್ರಿ ಮಲಗುವಾಗ ಚಿನ್ನವನ್ನು ದಿಂಬು ಪಕ್ಕ ಇಟ್ಟಿದ್ದು ಅದು ದಿಂಬು ಕವರ್ ಒಳಗಡೆ ಸೇರಿದೆ ಎಂದಿದ್ದಾರೆ.

ಕೊನೆಗೂ ದಂಪತಿಗಳು ಕಳೆದುಕೊಂಡಿದ್ದ ಸುಮಾರು 2 ಲಕ್ಷ ಮೌಲ್ಯದ 20 ಗ್ರಾಂ ಚಿನ್ನ ಮರಳಿ ಕೈ ಸೇರಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *