Breaking
22 Mar 2026, Sun

ನ. 23: ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಬೈಕ್ ರೇಸ್: ಪೋಸ್ಟರ್ ಬಿಡುಗಡೆ

ಬಂಟ್ವಾಳ: ರೈಡರ್ಸ್ ಕ್ಲಬ್ ವಾಮದಪದವು ಇದರ ವತಿಯಿಂದ ಜಯಚಂದ್ರ ಬೋಲ್ಮಾರ್ ಇವರ ನೇತೃತ್ವದಲ್ಲಿ ನವೆಂಬರ್ 23 ರಂದು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ” ಬೈಕ್ ರೇಸ್ ” ನಡೆಯಲಿದ್ದು ಇದರ ಪೋಸ್ಟರ್ ಬಿಡುಗಡೆಯೂ ಇಂದು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಬಳಿಕ ಜಯಚಂದ್ರ ಬೋಲ್ಮರು, ಉದಯ ಕುಮಾರ್ ಶೆಟ್ಟಿ ಕುಂಡೋಳಿ, ನವೀನ್ ಚಂದ್ರ ಶೆಟ್ಟಿ, ಯತೀಶ್ ಶೆಟ್ಟಿ ವಿಜಯನಗರ ಸೇರಿದಂತೆ ಮತ್ತಿತ್ತರರು ಪೋಸ್ಟರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈಡರ್ಸ್‌ ಕ್ಲಬ್‌ ವಾಮದಪದವು ತಂಡದ ಸದಸ್ಯರು ಬೈಕ್ ರೈಡರ್ಸ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರೇಸ್ ನಲ್ಲಿ ಭಾಗವಹಿಸಿ. ಇದೊಂದು ನಿಮಗೆ ಸುವರ್ಣ ಅವಕಾಶ. ರಾಜ್ಯದ ಯಾವುದೇ ಮೂಲೆಯ ರೈಡರ್ಸ್‌ಗಳು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿವೇಕಾ ನಂದ ಪೂಜಾರಿ, ಕಿಶೋರ್ ಕುಮಾರ್ ನಾಯರ್ ಮೇರ್, ಶ್ರೇಯಸ್ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯ ಮಾಲಕರಾದ ಯೋಗೀಶ್ ಪೂಜಾರಿ, ಸೂಕ್ತ ನ್ಯೂಸ್ ವಾಹಿನಿ ಮುಖ್ಯಸ್ಥರಾದ ಪ್ರದೀಪ್ ಕುಕ್ಕಿಪಾಡಿ, ಚಂದ್ರ ಶೇಖರ್ ಶೆಟ್ಟಿ, ಸಂಘಟಕ ರಾದ ರಂಜಿತ್ ರೈ ಆಲದಪದವು, ಪ್ರಕಾಶ್ ಪೂಜಾರಿ ಪಾಲೆದಡಿ, ಸೌಕತ್ ಆಲಿ ಆಲದ ಪದವು, ಸತೀಶ್ ಪೂಜಾರಿ, ಸುದೀಪ್ ಬೊಟ್ಟಿ ಕಂಡ, ಬೈಕ್ ರೈಡರ್ ಸೋನು ಸೆಬಾ ಸ್ಟಿಯನ್, ಸುಧೀರ್ ಮಾಲಾಡಿ, ಚಂದ್ರ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *