Breaking
19 Sep 2026, Sat

ಕಚೇರಿಯಲ್ಲೇ ಆತ್ಯಹತ್ಯೆಗೆ ಶರಣಾದ ವಕೀಲೆ

ಕಾಸರಗೋಡು: ವಕೀಲೆಯೊಬ್ಬರು ಕಚೇರಿಯಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡುವಿನ ಕುಂಬಳೆಯಲ್ಲಿ ಸೆ.30 ರಂದು ನಡೆದಿದೆ.

ಖ್ಯಾತ ಯುವ ನ್ಯಾಯವಾದಿ, ಡಿವೈಎಫ್ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆ, ಕುಂಬಳೆ ನಿವಾಸಿ ರಂಜಿತಾ (34) ಅವರು ಕುಂಬಳೆ ಪೇಟೆಯ ತನ್ನ ಕಛೇರಿಯಲ್ಲಿ ಮಂಗಳವಾರ ಸಂಜೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಇವರು ಸಿಪಿಐಎಂ ನ ಭರವಸೆಯ ನಾಯಕಿಯಾಗಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ತನ್ನ ವೈಯ್ಯಕ್ತಿಕ ಕಾರಣ ಆತ್ಮಹತ್ಯೆಗೆ ಪ್ರೇರಕ ಎಂಬ ಬರಹ ದೊರೆತಿದೆ. ಮೃತಳು ಪತಿ ಮತ್ತು ಮಗುವನ್ನು ಅಗಲಿದ್ದಾಳೆ.

ಕುಂಬಳೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *