Breaking
22 Mar 2026, Sun

ಹಾಸನದಲ್ಲಿ ನಿಗೂಢ ಸ್ಪೋಟ: ದಂಪತಿ ಹಾಗೂ ಮಗುವಿಗೆ ಗಂಭೀರ ಗಾಯ

ಹಾಸನ: ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟದಲ್ಲಿ ದಂಪತಿ ಹಾಗೂ ಮಗುವಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಈ ನಿಗೂಢ ಸ್ಪೋಟದಿಂದ ಸುದರ್ಶನ್ ಆಚಾರ್(32) ಹಾಗೂ ಅವರ ಪತ್ನಿ ಕಾವ್ಯ (27) ಹಾಗೂ ಅವರ ಮಗು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಪೋಟದ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *