Breaking
21 Jun 2026, Sun

ರಾಯಿ: ಅ.2ರಂದು 23 ನೇ ವರ್ಷದ ಶಾರದಾ ಮಾತೆ ಶೋಭಾಯಾತ್ರೆ ಹಾಗೂ ಸಾಧಕರಿಗೆ ಸನ್ಮಾನ

ಬಂಟ್ವಾಳ: ರಾಯಿ-ಕೊಯಿಲ-ಅರಳದ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಅ.2ರಂದು 23 ನೇ ವರ್ಷದ ಶಾರದಾ ಮಾತೆ ಶೋಭಾಯಾತ್ರೆ ಜರುಗಲಿದೆ.

ಇದೇ ವೇಳೆ ರಾಯಿ-ಕೊಯಿಲ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಯಿ ‘ಶ್ರೀಯಾ ಗಾರ್ಡನ್’ ಸಭಾಂಗಣದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮುಂಬೈ ಶ್ರೀನಿವಾಸ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ಮತ್ತು ಸ್ಥಳೀಯ ಮಾವಂತೂರು ಬಲವಂಡಿ ಕ್ಷೇತ್ರದ ಗಡಿ ಪ್ರಧಾನ ಎಂ.ದುರ್ಗಾದಾಸ್ ಶೆಟ್ಟಿ ಇವರಿಗೆ ‘ಹುಟ್ಟೂರ ಸನ್ಮಾನ’ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ‘ಜೈ ಭಜರಂಗ ಬಲಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *