ವಿಟ್ಲ: ಪಿಬಿ ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕಕ್ಕೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಬಾಲಕರು, ಘಟಕದ ಸಿಸಿ ಕ್ಯಾಮರಾ, ದೇವರ ಫೋಟೋ ಮತ್ತು ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಹಾನಿಗೈದ ಘಟನೆ ನಡೆದಿದೆ.

ಪುಣಚ ಗ್ರಾಮದ ಆನಂದಗೌಡ ಎಂಬವರು ತಮ್ಮ ಪತ್ನಿಯ ಹೆಸರಿನಲ್ಲಿ ಇಂಟರ್ ಲಾಕ್ ಇಂಡಸ್ಟ್ರೀಸ್ ಘಟಕವನ್ನು ನಡೆಸುತ್ತಿದ್ದು, ಸಿಸಿಕ್ಯಾಮರಾವನ್ನು ಅಳವಡಿಸಿದ್ದರು. ನಿನ್ನೆ ಸಂಜೆ ಘಟಕಕ್ಕೆ ಯಾರೋ ಅಕ್ರಮವಾಗಿ ಪ್ರವೇಶಿಸಿ ಘಟಕದ ಬಾಗಿಲು ಮುರಿದು 2 ಸಿಸಿ ಕ್ಯಾಮರಾಗಳನ್ನು ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮರಾದ ಡಿವಿಆರ್ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿದೆ.

ಮಾಲೀಕರ ಮೊಬೈಲ್‌ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಕೃತ್ಯವೆಸಗಿದ ಇಬ್ಬರು ಅಪ್ರಾಪ್ತ ಬಾಲಕರ ಚಹರೆ ಪತ್ತೆಯಾಗಿದ್ದು, ಸದ್ಯ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಪೋಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದಾರೆ.

ಇಬ್ಬರು ಬಾಲಕರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.



