ಬೆಳ್ತಂಗಡಿ : ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ವೇಳೆ ಜೆಸಿಬಿ ಮೂಲಕ ಮಣ್ಣು ಅಗೆದಾಗ 4 ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ವಾಣಿ ಕಾಲೇಜು ಬಳಿ ಎಪಿಎಂಸಿ ಹೋಗುವ ರಸ್ತೆ ತಿರುವಿನಲ್ಲಿ ಸೆ.26ರಂದು ನಡೆದಿದೆ.

ಘಟನೆಯ ವೇಳೆ ಯಾವುದೇ ವಾಹನಗಳು ಹಾಗೂ ಜನರ ಓಡಾಟ ಇರದ ಕಾರಣ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.





