ಕಾರ್ಕಳ: ಸತ್ತ ದನವೊಂದನ್ನು ದಫನ ಮಾಡದೆ ದುಷ್ಕರ್ಮಿಗಳು ಎಸೆದು ಹೋದ ಘಟನೆ ಕಾಂತಾವರ-ಬಾರಾಡಿ ಕ್ರಾಸ್ ಎಂಬಲ್ಲಿ ಸೆ.26ರಂದು ಬೆಳಕಿಗೆ ಬಂದಿದೆ.

ಸತ್ತ ದನದ ಮೇಲೆ ಕುರುಚಲು ಗಿಡಗಳನ್ನು ಮುಚ್ಚಿಹಾಕಿದ್ದು, ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಜಮಾಯಿಸಿ, ಬಳಿಕ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು ,ಬಳಿಕ ದಫನ ಕ್ರಿಯೆ ನಡೆಸಲಾಗಿದೆ.




