ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರಿನ ಅಬ್ತಾಸ್ ಹಾಜಿ ಕಾಂಪೌಂಡ್‌ನ ನಿವಾಸಿ, ಶೇಖ್ ಶಹಬಾಜ್ (31) ಮತ್ತು ಕಸಬಾ ಬೆಂಗ್ರೆ ನಿವಾಸಿ, ಮೊಹಮ್ಮದ್ ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ (30) ಎಂದು ಗುರುತಿಸಲಾಗಿದೆ.

ಬರ್ಕೆ ಪೊಲೀಸ್ ಠಾಣೆ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು.
ಶಹಬಾಜ್‌ನನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಇಂದುಪುರ ತಾಲೂಕಿನ 2 ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರುಗೂರು ಪ್ರದೇಶದಿಂದ ಸೆ. 24ರ ರಾತ್ರಿ ಬಂಧಿಸಲಾಗಿದೆ.

ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್‌ನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಂತ್ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ಮಚ್ಚೀಂದ್ರನಾಥ್ ಜೋಗಿ, ಸಿಬ್ಬಂದಿ ಅಭಿಷೇಕ್ ಮತ್ತು ವಿಠಲ್ ಗಡದಾರ್ ಅವರು ಸೆ. 25ರ ಸಂಜೆ 5 ಗಂಟೆ ಸುಮಾರಿಗೆ ಬಂಧಿಸಿದ್ದಾರೆ.




