ಮಂಗಳೂರು: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ) ಯ ಹೊಸ ಪದಾಧಿಕಾರಿಗಳ ಆಯ್ಕೆಯಲ್ಲಿ ಹಿರಿಯ ಪತ್ರಕರ್ತರು, ಬಹುಭಾಷಾ ಸಾಹಿತಿಗಳು ಹಾಗೂ ಕೊಂಕಣಿ ಪತ್ರಿಕಾ ಕ್ಷೇತ್ರದಲ್ಲಿ ಸಹ- ಸಂಪಾದಕರಾಗಿದ್ದ ರೇಮಂಡ್ ಡಿಕೂನಾ ತಾಕೊಡೆ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ವಕೀಲರಾದ ಲಿಸ್ಟನ್ ಡಿಸೋಜ ಅವರು ಆಯ್ಕೆಯಾದರು.

ಕಾನೂನು ವ್ಯಾಸಂಗ, ಪತ್ರಿಕಾ ಮಾದ್ಯಮ ಉನ್ನತ ವ್ಯಾಸಂಗ ಮಾಡಿರುವ ರೇಮಂಡ್ ಡಿಕೂನಾ ತಾಕೊಡೆ ಅವರು 1985 ರಿಂದ ಪತ್ರಕರ್ತರಾಗಿದ್ದು ಕೊಂಕಣಿ ಮಾತೃಭಾಷೆಗೆ ಟೊಂಕಕಟ್ಟಿ ರಾಕ್ಣೊದಲ್ಲಿ ಪ್ರಚಾರಕರು ಆಗಿ ಕೆಲಸಮಾಡಿದರು. ನಂತರ ಮಿತ್ರ್ ಕೊಂಕಣಿ ಪತ್ರಿಕೆಯ ಸಹ ಸಂಪಾದಕ ಆಗಿ ಹನ್ನೆರಡು ವರ್ಷಗಳ ಕಾಲ ಉಚಿತವಾಗಿ ಸೇವೆಯನ್ನು ಮಾಡಿ ಕೆಥೊಲಿಕ್ ಸಭಾದ ಅಮ್ಚೊ ಸಂದೇಶ್ ಪತ್ರಿಕೆಯ ಸಂಪಾದಕ ಆಗಿ ಅದನ್ನು ಲಾಭಕ್ಕೆ ತಂದು ನಂತರ ಕನ್ನಡದ ಜನವಾಹಿಯಲ್ಲಿ ಹಾಗೂ ಡೈಜಿವರ್ಲ್ಡ್ ನ ಆರಂಭದಲ್ಲಿ ವರದಿಗಾರ ಆದರು. ನಂತರ ಪಿಂಗಾರ ವಾರ ಪತ್ರಿಕೆಯನ್ನು ಆರಂಭಿಸಿದರು. ನಾಲ್ಕು ನಾಟಕ, ಹದಿನೇಳು ಪುಸ್ತಕಗಳು ಪ್ರಕಟ ಆಗಿದ್ದು ಕಳೆದ ಇಪ್ಪತ್ತು ವರ್ಷಗಳ ಕಾಲ ಸಂಪಾದಕ ಆಗಿ ಏಕೈಕ ಕ್ರೈಸ್ತರ ಪತ್ರಿಕೆ ನಡೆಸುತ್ತಿದ್ದಾರೆ.

ಎಂಸಿಸಿ ಬ್ಯಾಂಕ್ ಆರ್ಥಿಕ ಕಷ್ಟದಲ್ಲಿ ಇದ್ದಾಗ ಲಾಭಕ್ಕೆ ತರಲು ತಂಡ ಕಟ್ಟಿ ನಿರ್ದೇಶಕಮಂಡಳಿಯ ಸದಸ್ಯರಾಗಿ ಶ್ರಮಿಸಿದರು. ಡೊನ್ ಬಾಸ್ಕೊ ಹಾಲ್ ಪುನರ್ನಿರ್ಮಾಣ ಮಾಡಲು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ದುಡಿದು, ಕ್ರಿಸ್ಟೊಫರ್ ಅಸೋಸಿಯೇಷನ್ ಮೆನ್ಸ್ ಹಾಸ್ಟೆಲ್ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಇದ್ದು ಕಟ್ಟಡದ ಹಾಸ್ಟೆಲ್ ಕಾಯಕಲ್ಪ ಮಾಡಿ ನಿವಾಸಿಗಳಿಗೆ ನೆಮ್ಮದಿ ನೀಡಿದರು. ಕೆಥೊಲಿಕ್ ಸಭಾದ ಆರಂಭಕ್ಕೆ ಮೊದಲು ನಡೆದ ಒಪಿತ್ಯಾಗಿ ವಿರುದ್ಧದ ಚಳುವಳಿಯಲ್ಲಿ ವಿದ್ಯಾರ್ಥಿಯಾಗಿ ಸಕ್ರಿಯ ಭಾಗವಹಿಸಿದರು.

ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರು ಇತರ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಕಾರ್ಯದರ್ಶಿಯಾಗಿ ವಕೀಲರು ಮತ್ತು ಕೊಂಕಣಿ ನಾಟಕ ಸಭೆಯ ಡೊನ್ ಬೊಸ್ಕೊ ಹೊಲ್ ಪುನರ್ನಿರ್ಮಾಣದ ರೂವಾರಿ ಲಿಸ್ಟನ್ ಡಿಸೋಜ, ಖಜಾಂಚಿಯಾಗಿ ಸ್ಕವ್ಟ್ ಮತ್ತು ಗೈಡ್ , ದಕ ಜಿಲ್ಲಾ ಉಪಾಧ್ಯಕ್ಷರು ಮತ್ತು ನಿವೃತ್ತ ಬ್ಯಾಂಕ್ ಯೂನಿಯನ್ ಪದಾಧಿಕಾರಿಗಳಾದ ಲಯನ್ ಕೆ ವಸಂತ ರಾವ್, ಉಪಾಧ್ಯಕ್ಷರು ಆಗಿ ಜಿಎಸ್‌ಬಿ ಮಹಿಳಾ ಮಂಡಳ್ ಇದರ ಸಕ್ರಿಯ ಪದಾದಿಕಾರಿ ಮೀನಾಕ್ಷಿ ಪೈ, ಸಹ ಕಾರ್ಯದರ್ಶಿಯಾಗಿ ಯುವ ಉದ್ಯಮಿ ಪ್ರಸಾದ್ ಶೆಣೈ ಅವಿರೋಧವಾಗಿ ಆಯ್ಕೆಯಾದರು.

ಕೆಬಿಎಂಕೆ ಕಾರ್ಯಕಾರಿಣಿಯ ಅಹ್ವಾನಿತ ಸದಸ್ಯರಾದ ಹಿರಿಯರಾದ ಗೀತಾ ಸಿ ಕಿಣಿ ಚುನಾವಣಾ ಅಧಿಕಾರಿಯಾಗಿ ಆಯ್ಕೆಯನ್ನು ನಡೆಸಿ ಹೊಸ ಪದಾಧಿಕಾಗಳ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸದಸ್ಯರಾದ ಜೂಲಿಯೆಟ್ ಫೆರ್ನಾಂಡೀಸ್, ಲಾರೆನ್ಸ್ ಪಿಂಟೊ, ಜೊಸ್ಸಿ ಪಿಂಟೊ, ಸುರೇಶ್ ಶೆಣೈ, ಎಡೊಲ್ಫ್ ಡಿಸೋಜ, ಝಿನಾ ಫೆರ್ನಾಂಡೀಸ್, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಉಪಸ್ಥಿತಿರಿದ್ದರು.



