ಬೆಳ್ತಂಗಡಿ: ಟಿಪ್ಪರ್ ಹಾಗೂ ಕಾರು ನಡುವೆ ಅಪಘಾತವಾದ ಘಟನೆ ಇಂದು(ಸೆ.26) ಲಾಯಿಲದ ಕಾಶಿಬೆಟ್ಟುವಿನಲ್ಲಿ ನಡೆದಿದೆ.


ಉಜಿರೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದ್ದು, ಚಾಲಕರ ಅತೀ ವೇಗದ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.





