Breaking
22 Mar 2026, Sun

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಂಗಳೂರ ಜಾನಪದ ವೈಭವದ ವಿಜ್ಞಾಪನೆ ಪತ್ರ ಬಿಡುಗಡೆ

ಬಂಟ್ವಾಳ: ‘ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು’ ಹಾಗೂ ವೈಟ್ ಲೋಟಸ್ ಪೌಂಡೇಶನ್ ಟ್ರಸ್ಟ್’ ಇವರ ಸಹಯೋಗದೊಂದಿಗೆ 2026 ಜನವರಿ 24 ಮತ್ತು 25 ರಂದು “ಬೆಂಗಳೂರಲ್ಲಿ ಮಂಗಳೂರ ಜಾನಪದ ವೈಭವ” ಕಾರ್ಯಕ್ರಮ ನಡೆಯಲಿದ್ದು ಇದರ ವಿಜ್ಞಾಪನೆ ಪತ್ರವು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸೆ.26ರಂದು ಬಿಡುಗೊಂಡಿತು.

ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಮತ್ತು ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇದರ ರಾಜ್ಯಾಧ್ಯಕ್ಷ ಬೋರಲಿಂಗಯ್ಯ ಹಾಗೂ ಸರ್ವ ಸದಸ್ಯರು ವಿಜ್ಞಾಪನೆ ಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಕರಾವಳಿ ಜಿಲ್ಲೆಗಳ ಸಂಸ್ಕೃತಿ, ಜನಪದ ಕಲೆ, ಆಹಾರ ಮೇಳ, ಆಚಾರ ವಿಚಾರ, ಭಾಷೆ, ಸೇರಿದಂತೆ ಕರಾವಳಿ ಚಿತ್ರಣದ ವೈಭವವನ್ನು ಉಣಬಡಿಸಲೂ ಈ ವಿಶೇಷ ತಂಡ ಸಿದ್ಧವಾಗಿದೆ.

ವಿಜ್ಞಾಪನೆ ಪತ್ರ ಬಿಡುಗಡೆಯ ಸಂದರ್ಭದಲ್ಲಿ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಜಿಲ್ಲಾ ಉಪಾಧ್ಯಕ್ಷರಾದ ಮಂದಾರ ರಾಜೇಶ್ ಭಟ್ , ಟಿಪೇಶ್ ಅಮೀನ್, ಸಂಚಾಲಕ ರಾಜೇಶ್ ಆಳ್ವ, ಕಾರ್ಯಕ್ರಮದ ವ್ಯವಸ್ಥಾಪಕರೂ , ಬಂಟ್ವಾಳ ತಾಲೂಕಿನ ಆದ್ಯಕ್ಷೆ ಪ್ರಮಿಳಾ ಸಾಯಿಪ್ರಿಯ ಮಾಣೂರು, ಶಿವಪ್ರಸಾದ್ ಕೊಕ್ಕಡ, ತಾಲೂಕಿನ ಅಧ್ಯಕ್ಷರುಗಳಾದ ಚಂಚಲ ತೇಜೋಮಯ , ಪದ್ಮಶ್ರೀ ಭಟ್, ಗಿರಿಜ ಬೋರಲಿಂಗಯ್ಯ, ನಯನ ಪಮ್ಮಿ ಕೊಡಿಯಾಲ್ ಬೈಲ್, ತಾರಾನಾಥ ಕೊಟ್ಟಾರಿ, ತುಕರಾಮ ಪೂಜಾರಿ, ಹರೀಶ್ ಶೆಟ್ಟಿ , ಲೀಗಲ್ ಅಡ್ವೈಸರ್ ಸಂದೀಪ್ ಶೆಟ್ಟಿ, ವಸಂತಿ ಲೋಕನಾಥ ಶೆಟ್ಟಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಬಂಟ್ವಾಳ ಘಟಕದ ಗೌರವಾಧ್ಯಕ್ಷರು ರಾಮ್ ಭಟ್ ,ಅನುವಂಶಿಕ ವಿಶಾಲಾಕ್ಷಿ ಶೆಟ್ಟಿ, ಜಯಶೆಟ್ಟಿ, ಅರ್ಚಕರು ಪರಮೇಶ್ವರ ಭಟ್ ಗೌರವ ಉಪಸ್ಥಿತರಿದ್ದರು. ಲೀಲಾವತಿ, ಪ್ರತಿಭಾ ಬಿ ಶೆಟ್ಟಿ, ಗಿರಿಜ ಪುತ್ತೂರು, ಸುಮಾ ಭಟ್ ಹಾಗೂ ಭಜನಾ ತಂಡ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *