Breaking
21 Sep 2026, Mon

ಸಜೀಪ ಮೂಡದಲ್ಲಿ ಮೂರು ದಿನಗಳ ಕಾಲ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ

ಬಂಟ್ವಾಳ: ಶ್ರೀ ಶಾರದಾ ಪೂಜಾ ಸಮಿತಿ ಸುಭಾಷ್ ಯುವಕ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ 99 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ಅಂಗವಾಗಿ ಸೆ. 29 ಸೋಮವಾರದಿಂದ ಅ.1 ಬುಧವಾರ ತನಕ ಮೂರು ದಿನಗಳ ಪರ್ಯಂತವು ದ .ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಸುಭಾಷ್ ನಗರ ಸಜೀಪ ಮೂಡದಲ್ಲಿ ನಡೆಯಲಿದೆ.

ಈ ಶಾರದ ಪೂಜೆ ಮಹೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ವಿವಿಧ ಬಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ವಿಶ್ವ ಭಾರತಿ ಯಕ್ಷ ಸಂಜೀವಿನಿ ಇವರಿಂದ ಯಕ್ಷಗಾನ ತಾಳಮದ್ದಳೆ, ಲಕುಮಿ ತಂಡ ಮಂಗಳೂರು ಇವರಿಂದ ತುಳು ನಾಟಕ, ಧಾರ್ಮಿಕ ಸಭಾ ಕಾರ್ಯಕ್ರಮ ದಸರಾ ವೇಷಗಳ ಸ್ಪರ್ಧೆ ಅನ್ನದಾನ ವಿವಿಧ ಧಾರ್ಮಿಕ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳು ಜರುಗಲಿದೆ.

Leave a Reply

Your email address will not be published. Required fields are marked *