Breaking
22 Mar 2026, Sun

ಎಸ್.ಕೆ.ಸುವರ್ಣ ಸೌಂಡ್ಸ್ & ಲೈಟಿಂಗ್ ಅಂಗಡಿ ಮಾಲಕ ಸದಾನಂದ ನಾಪತ್ತೆ

ಬಂಟ್ವಾಳ: ಎಸ್.ಕೆ.ಸುವರ್ಣ ಸೌಂಡ್ಸ್ & ಲೈಟಿಂಗ್ ಅಂಗಡಿ ಮಾಲಕರಾದ ಸಜೀಪ ಮೂಡ ಗ್ರಾಮದ ಕಂದೂರು ನಿವಾಸಿ ಸದಾನಂದ(50 ವ)ಅವರು ಸೆ.16 ರಂದು ಕಾಣೆಯಾಗಿದ್ದಾರೆ.

ಸಂಜೆ 4.30 ರ ವೇಳೆಗೆ ತನ್ನ ಮೊಬೈಲನ್ನು ಟೆಂಪೋದಲ್ಲಿ ಬಿಟ್ಟು ಯಾರಿಗೂ ಹೇಳದೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಪತ್ನಿ ರೋಹಿಣಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿ 170 ಸೆ.ಮೀ.ಎತ್ತರ , ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಗ್ರೇ ಬಣ್ಣದ ಪ್ಯಾಂಟ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ. ಹಿಂದಿ, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

Leave a Reply

Your email address will not be published. Required fields are marked *