ಕಾಸರಗೋಡು: ಉದುಮ ಸಮೀಪದ ವಳಿಯವಲಪ್ಪು ಎಂಬಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯಲು ಯತ್ನಿಸುತ್ತಿದ್ದಾಗ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ವಳಿಯವಲಪ್ಪುವಿನ ಅಶ್ವಿನ್ ಅರವಿಂದ (18) ಎಂದು ಗುರುತಿಸಲಾಗಿದೆ.

ಬಾವಿಯ ಕಟ್ಟೆಗೆ ಹತ್ತಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯುವ ವೇಳೆ ಬಾವಿಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾನೆ.




