ಬಂಟ್ವಾಳ: ಬಿಜೆಪಿ ಸಂಗಬೆಟ್ಟು ಶಕ್ತಿಕೇಂದ್ರ ಬೂತ್ ಸಂಖ್ಯೆ 4ರ ಸೇವಾ ಪಾಕ್ಷಿಕ ಅಭಿಯಾನದ ಅಡಿಯಲ್ಲಿ, ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಜನ್ಮದಿನಾಚರಣೆಯನ್ನು ಶಕ್ತಿ ಕೇಂದ್ರದ ಅಧ್ಯಕ್ಷರಾದ ನವೀನ್ ಹೆಗ್ಡೆ ಮನೆಯಲ್ಲಿ ಆಚರಿಸಲಾಯಿತು.

ಪುಷ್ಪರ್ಚನೆ ಬಳಿಕ ತಾಯಿಯ ಹೆಸರಲ್ಲೊಂದು ಗಿಡ ನೆಡುವ ಮೂಲಕ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ರತ್ನಕುಮಾರ್ ಚೌಟ, ಸಂಗಬೆಟ್ಟು ಮಹಾಶಕ್ತಿಕೇಂದ್ರದ ಅಧ್ಯಕ್ಷ ಸತೀಶ್ ಪೂಜಾರಿ, ಬೂತು ಅಧ್ಯಕ್ಷರಾದ ಗಣೇಶ್ ಕೋಟ್ಯಾನ್, ಪ್ರಮುಖರಾದ ದೇವರಾಜ್ ಸಾಲ್ಯಾನ್, ಸಂಪತ್ ದಾಸ್, ದೀಪಕ್ ಶೆಟ್ಟಿಗಾರ್, ಸಂಜಯ್ ಸದಸ್ಯರಾದ ಶಕುಂತಲಾ, ಶಾಂತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




