ಬಂಟ್ವಾಳ: ಮಹಾಕಾಳಿ ಪಡ್ಪು ಸಜೀಪ ಮುನ್ನೂರಿನ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರ ನವರಾತ್ರಿ ಉತ್ಸವವು ಬುಧವಾರದಿಂದ ಆರಂಭವಾಗಿ ಅ.1 ಗುರುವಾರದವರೆಗೆ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಲಿತಾ ಸಹಸ್ರನಾಮ ಅರ್ಚನೆ , ಸಪ್ತಶತಿ ಪಾರಾಯಣ , ಕಲ್ಪೋ ಕ್ತಪೂಜೆ ಪ್ರಸನ್ನ ಪೂಜೆ, ಮಹಾಮಂಗಳಾರತಿ ರಂಗ ಪೂಜೆ ವಿದ್ಯುಕ್ತವಾಗಿ ನಡೆಯಲಿದೆ.





