Breaking
22 Mar 2026, Sun

ವಿದ್ಯಾರ್ಥಿಯನ್ನ ವಿವಸ್ತ್ರಗೊಳಿಸಿ ಚಪ್ಪಲಿಯಿಂದ ಹಲ್ಲೆ: ಮೂವರು ಪೊಲೀಸ್‌ ವಶಕ್ಕೆ

ಚೆನ್ನೈ: ರ‍್ಯಾಗಿಂಗ್ ನೆಪದಲ್ಲಿ ವಿದ್ಯಾರ್ಥಿಗಳ ಗುಂಪೊಂದು ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಚಪ್ಪಲಿಯಿಂದ ಥಳಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮಧುರೈನಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು ಐಟಿಐ ವಿದ್ಯಾರ್ಥಿಯೊರ್ವನಿಗೆ ಸಹ ವಿದ್ಯಾರ್ಥಿಗಳ ಗುಂಪು ಚಿತ್ರಹಿಂಸೆ ನೀಡಿ, ವಿವಸ್ತ್ರಗೊಳಿಸಿ ಅವಮಾನಿಸಿದ್ದು , ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ, ಮೂವರು ವಿದ್ಯಾರ್ಥಿಗಳು ಯುವ ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿದ್ದು, ಒಬ್ಬನು ಕೃತ್ಯವನ್ನು ಚಿತ್ರೀಕರಿಸುತ್ತಿದ್ದರೆ, ಇನ್ನೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾನೆ ಮತ್ತು ಮೂರನೆಯವನು ಆ ವಿದ್ಯಾರ್ಥಿಯ ಬಗ್ಗೆ ಅಶ್ಲೀಲ ಮಾತುಗಳನ್ನು ಆಡಿದ್ದಾನೆ. ಇನ್ನೂ ಹಲವರು ಅಲ್ಲೇ ನಿಂತಿದ್ದರೂ ಕೂಡ ತಪ್ಪಿಸುವ ಕೆಲಸವನ್ನು ಯಾರೂ ಮಾಡಿಲ್ಲ ಎನ್ನಲಾಗಿದ್ದು, ಇದೆಲ್ಲವೂ ನಶೆಯಲ್ಲಿ ಮಾಡಿರುವಂತಿದೆ ಎಂದು ಆರೋಪಿಸಲಾಗಿದೆ.

ಸದ್ಯ, ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *