ಬಂಟ್ವಾಳ : ತಾಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಹಿರಿಯ ಇಂಜಿನಿಯರ್ ಪದ್ಮನಾಭ ಆರ್. ಮತ್ತು ಪವಿತ್ರ ದಂಪತಿಯನ್ನು ಸೆ. 22 ರಂದು ಜಕ್ರಿಬೆಟ್ಟಿನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಸದಸ್ಯ ಆಲ್ವಿನ್ ಮಿನೇಜಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




