Breaking
22 Jun 2026, Mon

ಅ.12: ವೀರ-ವಿಕ್ರಮ ಜೋಡುಕರೆಯಲ್ಲಿ ‘ ರೋಟರಿ ಕಂಬಳ’

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಅ.12ರಂದು ನಡೆಯಲಿರುವ ‘ರೋಟರಿ ಕಂಬಳ’ ಬಗ್ಗೆ ಮೊಡಂಕಾಪು ರೋಟರಿ ಕ್ಲಬ್ಬಿನಲ್ಲಿ ಸೆ. 21 ರಂದು ಪೂರ್ವಭಾವಿ ಸಭೆ ನಡೆಯಿತು.

ಈ ಸಭೆಯಲ್ಲಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಮಾತನಾಡಿ, ಕಂಬಳದ ಆಯೋಜನೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ಫೆರ್ನಾಂಡಿಸ್, ಪ್ರಮುಖರಾದ ಎಲ್ಯಾಸ್ ಸ್ಯಾಂಕ್ಟಿಸ್, ನಾರಾಯಣ ಹೆಗ್ಡೆ, ಕೆ.ಪದ್ಮನಾಭ ರೈ, ಅವಿಲ್ ಮಿನೇಜಸ್, ಎಂ.ಪದ್ಮರಾಜ ಬಲ್ಲಾಳ್, ವಿಜಯ ಫೆರ್ನಾಂಡಿಸ್, ಬಸ್ತಿ ಮಾಧವ ಶೆಣೈ, ಭಾಸ್ಕರ ರೈ ಕಟ್ಟ, ಮಂಜುನಾಥ ನಾಯಕ್, ಡಾ.ಗೋವರ್ಧನ ರಾವ್, ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *