Breaking
22 Mar 2026, Sun

ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ, ಪ್ರಭಾವಳಿ ಸಮರ್ಪಣೆ

ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ 9 ದಿನಗಳ ನವರಾತ್ರಿ ಉತ್ಸವಕ್ಕೆ ಸೆ. 22 ರಂದು ಚಾಲನೆ ನೀಡಿ ಬಳಿಕ ದೇವರಿಗೆ ‘ಪ್ರಭಾವಳಿ’ ಸಮರ್ಪಿಸಲಾಯಿತು.

ಸಂಜೆಯ ವೇಳೆ ನೃತ್ಯ, ಭಜನೆ ಸಹಿತ ನವರಾತ್ರಿ ಪೂಜೆ, ರಾತ್ರಿ ರಂಗ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಶಿಲ್ಪಿ ಯಶೋಧರ ಪೆರಿಂಜೆ, ಪುರಸಭೆ ಸದಸ್ಯ ಜಗದೀಶ ಕುಂದರ್, ಪ್ರಮುಖರಾದ ಕೆ.ಬಾಬು ಸಪಲ್ಯ ವಗ್ಗ, ಮೋಹನ್ ಕೆ.ಶ್ರೀಯಾನ್ ರಾಯಿ, ಭಜನಾ ಮಂಡಳಿ ಅಧ್ಯಕ್ಷ ಕೀರ್ತನ್ ಪೂಜಾರಿ, ಗೌರವಾಧ್ಯಕ್ಷ ಜಯ ಪೂಜಾರಿ, ಹರೀಶ ಪಿಲಿಂಗಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *