ಕಾಪು: ತಾಲೂಕಿನ ಕುರ್ಕಾಲು ಸುಭಾಸ್ ನಗರದಲ್ಲಿ ಸುಳ್ಳು ಆಪಾದನೆಗಳಿಂದ ಬೇಸತ್ತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 21ರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಶಿರ್ವ ಠಾಣೆ ವ್ಯಾಪ್ತಿಯ ಕುರ್ಕಾಲು ಸುಭಾಸ್‌ನಗರ ನಿವಾಸಿ ಶೇಖ್ ಅಬ್ದುಲ್ಲಾ (38) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹಗಳಿಂದ ನೊಂದು ಮನೆಯ ಚಾವಡಿಯ ಮೇಲೆ ಸ್ಲಾಬ್‌ನ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಹೋದರ ಶೇಖ್ ಫಾರೂಕ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




