Breaking
29 Jun 2026, Mon

ಕಾರ್ಕಳ: ಆನ್‌ಲೈನ್ ಗೇಮಿಂಗ್ ಗೀಳು : ಆ್ಯಪ್ ಇನ್ಸ್ಟಾಲ್ ಮಾಡಿಕೊಡುತ್ತಿದ್ದಾತ ಅಂದರ್‌

ಕಾರ್ಕಳ: ಆನ್‌ಲೈನ್ ಗೇಮಿಂಗ್ ಗೀಳು ಬೆಳೆಸಿಕೊಂಡು ಇತರರಿಗೂ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಜೀರ್ (44) ಗಂಜಿಮಠ ಎಂಬಾತ ತಾನು ಆನ್‌ ಲೈನ್‌ ಗೇಮಿಂಗ್‌ ಗೆ ಬಲಿಯಾಗಿದ್ದಲ್ಲದೆ, ಇತರರನ್ನೂ ಪ್ರೇರೇಪಿಸಿ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ಆತನನ್ನು ವಶಕ್ಕೆ ಪಡೆದು ಅವನ ಫೋನ್ ಪರಿಶೀಲಿಸಿದಾಗ ವೆಬ್ ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್‌ಲೈನ್ ಬೆಟ್ಟಿಂಗ್ ಆಡುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಆತನ ಬಳಿ ಇದ್ದ 30,000 ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *