Breaking
19 Sep 2026, Sat

ಸುಳ್ಯದಲ್ಲಿ ಅಡಿಕೆ ಕಳವು: ಇಬ್ಬರು ಆರೋಪಿಗಳ ಬಂಧನ

ಸುಳ್ಯ: ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿಯಲ್ಲಿ ಅಡಿಕೆ ಸಂಗ್ರಹಿಸುವ ಗೋದಾವಿನಿಂದ ಅಡಿಕೆ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಸುಪ್ರಿತ್‌ ಕೆ. (22) ಮತ್ತು ಜಾಲ್ಸೂರು ಗ್ರಾಮದ ಮಹಮ್ಮದ್‌ ಸಿನಾನ್‌(21) ಎಂದು ಗುರುತಿಸಲಾಗಿದೆ.

ಸೆ. 12 ರಂದು ದಿನಸಿ ಅಂಗಡಿ ಮಾಲಕ ಮಹಮ್ಮದ್‌ ರಫೀಕ್‌ ಎಸ್‌. ಡಿ. ಅವರ ಅಡಿಕೆ ಸಂಗ್ರಹಿಸುವ ಗೋದಾಮಿನಿಂದ ಅಡಿಕೆ ಕಳ್ಳತನವಾಗಿದ್ದು, ಈ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡು ಆರೋಪಿಗಳನ್ನು ಸೆ. 19 ರಂದು ಮಂಡೆಕೋಲು ಗ್ರಾಮದ ಮುರೂರು ಚೆಕ್‌ ಪೋಸ್ಟ್‌ ಬಳಿ ವಶಕ್ಕೆ ಪಡೆದು ಅವರಿಂದ 1 ಕ್ವಿಂಟಾಲ್‌ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿದ ಆಟೋ ರಿಕ್ಷಾವನ್ನು ವಶ ಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *