Breaking
29 Jun 2026, Mon

15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ ಹಾಕಲು ಸರ್ಕಾರ ಆದೇಶ

ಕೇಂದ್ರ ಸರ್ಕಾರದ ಆದೇಶದಂತೆ ನೋಂದಣಿಯಾಗಿ 15 ವರ್ಷ ಪೂರ್ಣಗೊಂಡ ರಾಜ್ಯದಲ್ಲಿರುವ ಸರ್ಕಾರಿ ಇಲಾಖೆ, ನಿಗಮ, ಮಂಡಳಿ ಸೇರಿ ವಿವಿಧ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ಆದೇಶ ನೀಡಿದೆ.

ಪರಿಸರ ಸಂರಕ್ಷಣೆಯ ಉದ್ದೇಶದಿಂದ ನೋಂದಣಿಯಾಗಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಾಶ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.

ಈಗಾಗಲೇ ಆದ್ಯತೆ ಮತ್ತು ಉಪಯೋಗಕ್ಕೆ ಬಾರದ ಆಧಾರದ ಮೇಲೆ ಐದು ಸಾವಿರ ವಾಹನಗಳನ್ನು ನಾಶ ಮಾಡುವಂತೆ ಆದೇಶಿಸಲಾಗಿತ್ತು. ಈ ಹಿನ್ನೆಲೆ ನೋಂದಣಿಯಾಗಿ 15 ವರ್ಷ ಪೂರ್ಣಗೊಂಡ ವಾಹನಗಳನ್ನು ರಾಜ್ಯದಲ್ಲಿರುವ ವಾಹನ ಸ್ಕ್ರಾಪಿಂಗ್ ಘಟಕಗಳಲ್ಲಿ ನಾಶ ಮಾಡುವಂತೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *