Breaking
19 Sep 2026, Sat

ತಲ್ಲೂರು–ಜಾಲಾಡಿ ನಡುವಿನ ಎಂಬಾಕ್‌ಮೆಂಟ್ ಬಳಿ ಬೈಕ್ ಸ್ಕಿಡ್: ಬೈಕ್ ಸವಾರ ಗಂಭೀರ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲ್ಲೂರು – ಜಾಲಾಡಿ ನಡುವಿನ ಎಂಬಾಕ್ ಮೆಂಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೆ. 15 ರಂದು ಸಂಜೆ ನಡೆದಿದೆ.

ಗಂಭೀರ ಗಾಯಗೊಂಡ ಸವಾರನನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *