Breaking
19 Sep 2026, Sat

ಗಂಗೂಬಾಯಿ ಹಾನಗಲ್ ನೃತ್ಯ ವಿವಿ ಪರೀಕ್ಷೆ: ಕಲಾನಿಕೇತನ ನೃತ್ಯ ಫೌಂಡೇಶನ್, ಕಲ್ಲಡ್ಕ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ

ಬಂಟ್ವಾಳ: ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಕರ್ನಾಟಕ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಜೂನಿಯರ್ ಪರೀಕ್ಷೆ ನಡೆಯಿತು.

ಈ ಜೂನಿಯರ್ ಪರೀಕ್ಷೆಯಲ್ಲಿ ಕಲಾ ನಿಕೇತನ ನೃತ್ಯ ಫೌಂಡೇಶನ್ ರಿಜಿಸ್ಟರ್ಡ್ ಕಲ್ಲಡ್ಕ ಇದರ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ 21 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಇದರಲ್ಲಿ 18 ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು ಉಳಿದ ಮೂರು ಮಕ್ಕಳು ಫಸ್ಟ್ ಕ್ಲಾಸ್ ಪಾಸಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *