ತೋಡಾರಿನಲ್ಲಿ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

ಮೂಡುಬಿದಿರೆ : ತಾಲೂಕಿನ ತೋಡಾರಿನ ವಿವಾಹಿತ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಟೋ ರಿಕ್ಷಾ ಚಾಲಕನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆಟೋ ರಿಕ್ಷಾ ಚಾಲಕ ಅಶ್ರಫ್ ಎಂಬಾತ ಮಹಿಳೆಯಿಂದ ಚಿನ್ನ ಪಡೆದುಕೊಂಡು ಅದನ್ನು ವಾಪಸ್ ನೀಡದ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯಾಗಿದ್ದಾನೆ.

ಈತ ಮಹಿಳೆಯಿಂದ ನಗ ಮತ್ತು ನಗದು ಪಡೆದುಕೊಂಡಿದ್ದು ಹಲವು ದಿನಗಳಾದರೂ ವಾಪಸ್ ನೀಡಿರಲಿಲ್ಲ, ಇದರಿಂದ ನೊಂದ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಆಕೆಯ ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *