Breaking
23 Mar 2026, Mon

ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತನಿಂದ ಹಿಂದೂ ಜಾಗರಣ ವೇದಿಕೆಯ ಕಾರ್ಯರ್ತನ ಮೇಲೆ ಹಲ್ಲೆ ಆರೋಪ

ಪುತ್ತೂರು: ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಮತ್ತೆ ಇರುವ ಬಿರುಕು ಬಟಾ ಬಯಲಾಗಿದ್ದು ಗುರುವಾರ ರಾತ್ರಿ ಪುತ್ತೂರಿನ ದರ್ಬೆಯಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವನಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ಸುಭಾಸ್ ಮುಕ್ವೆ ಹಲ್ಲೆಗೊಳಗಾದ ಹಿಂದೂ ಜಾಗರಣ ವೇದಿಕೆಯ ಕಾರ್ಯರ್ತನಾಗಿದ್ದು, ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡ ಅಶೋಕ್ ತ್ಯಾಗರಾಜನಗರ ಹಲ್ಲೆ ನಡೆಸಿರುವ ಆರೋಪವನ್ನು ಎದುರಿಸುತ್ತಿದ್ದಾನೆ.

ಪುತ್ತಿಲ ಪರಿವಾರದಲ್ಲಿ ಬಿಜೆಪಿ ವಿರುದ್ಧ ನಡೆದ ಸಭೆಯ ವಿಚಾರದಲ್ಲಿ ನಡೆದಿದ್ದ ಭಾರೀ ಚರ್ಚೆ ನಡೆದಿತ್ತು. ಮಾತ್ರವಲ್ಲ ಈ ಸಭೆಯನ್ನು ಖಂಡಿಸಿ ವಾಟ್ಸಪ್ ಗ್ರೂಪ್ನಲ್ಲೂ ಚರ್ಚೆಯಾಗಿತ್ತು ಎನ್ನಲಾಗಿದೆ.
ಸದ್ಯ ಈ ಎಲ್ಲ ಸಭೆ, ಚರ್ಚೆಗಳು ಹಲ್ಲೆಯ ತನಕ ತಲುಪಿದೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *