Breaking
19 Sep 2026, Sat

ಉಡುಪಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ಕಡೆಕಾರು ಗ್ರಾಮದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಹತ್ತಿರ ಗೂಡ್ಸ್ ಲಾರಿಯಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಸೆ.12 ರಂದು ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಣಸೂರಿನ ಗಣೇಶ(38), ಆಂಧ್ರದ ಅನಂತಪುರಂನ ಪಿ. ಗೋಪಾಲ ರೆಡ್ಡಿ(43) ಬಂಧಿತ ಆರೋಪಿಗಳಾಗಿದ್ದಾರೆ.

ಅಂದಾಜು ಮೌಲ್ಯ ರೂ. 32 ರಿಂದ 50 ಲಕ್ಷ ರೂಪಾಯಿ ಮೌಲ್ಯದ 65 ಕೆಜಿ 39 ಗ್ರಾಂ ಗಾಂಜಾ, ಗೂಡ್ಸ್ ಲಾರಿ, 2 ಮೊಬೈಲ್ ಪೋನ್ ಗಳು, 1520 ರೂ. ನಗದು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡು ಸೊತ್ತುಗಳ ಅಂದಾಜು ಮೌಲ್ಯ 72 ಲಕ್ಷದ 21 ಸಾವಿರದ 520 ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *