Breaking
26 Mar 2026, Thu

ಬಂಗ್ಲ ಗುಡ್ಡದಲ್ಲಿ ಮಹಜರು ವೇಳೆ ಹೆಣಗಳ ರಾಶಿ ಸಿಕ್ಕಿದೆ : ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ

ಧರ್ಮಸ್ಥಳ: ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿದೆ ಎಂದು ಮೃತ ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೊತಿಟ್ಟ ಪ್ರಕರಣದಲ್ಲಿ ಎಸ್‌ಐಟಿ ತನ್ನನ್ನು ನಡೆಸುತ್ತಿರುವ ವಿಚಾರಣೆಗೆ ಸಂಬಂಧಪಟ್ಟಂತೆ ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲೇ ಈ ಅವಶೇಷಗಳು ಸಿಕ್ಕಿದೆ. ಇನ್ನು ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಅದ್ರಲ್ಲಿ ಮೇಲ್ನೋಟಕ್ಕೆ ಮಗುವಿನ ಅವಶೇಷಗಳು, ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡಾ ಸಿಕ್ಕಿದೆ ಎಂದ ಅವರು ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು ಎಂದರು.
ಕಳೆಬರಹಗಳು ಅಲ್ಲಲ್ಲಿ ಇತ್ತು, ಬುರುಡೆಗಳು ಮಣ್ಣಲ್ಲಿ ಎದ್ದು ಕಾಣ್ತಿತ್ತು ಎಂದವರು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *