ಮೈಸೂರು: ವಿವಾಹ ನಿಶ್ಚಯವಾಗಿದ್ದ ಯುವಕನೋರ್ವ ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸೆ. 10 ರಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಎಚ್.ಡಿ.ಕೋಟೆ ತಾಲೂಕಿನ ಮಾದಾಪುರದ ರೈತ ದಿನೇಶ್ ಅವರ ಪುತ್ರ ಪ್ರವೀಣ್ (27) ಎಂದು ಗುರುತಿಸಲಾಗಿದೆ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈತನಿಗೆ ನವೆಂಬರ್‌ನಲ್ಲಿ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ.

ಲಾಡ್ಜ್ ನಲ್ಲಿ ಕ್ರಿಮಿನಾಶಕದ ಬಾಟೆಲ್ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ.27-28ಕ್ಕೆ ಮೃತ ಪ್ರವೀಣನಿಗೆ ತನ್ನ ಅಕ್ಕನ ಮಗಳೊಂದಿಗೆ ಮದುವೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥವು ಆಗಿತ್ತು ಎಂದು ತಿಳಿದು ಬಂದಿದೆ.
ಸಾವು ಅನುಮಾನಾಸ್ಪದವಾಗಿದೆ ಎಂದು ಮೃತ ಪ್ರವೀಣ್ ತಂದೆ ದಿನೇಶ್ ಅವರಿಗೆ ದೂರು ನೀಡಿದ್ದಾರೆ.





