Breaking
21 Sep 2026, Mon

ಕಡಂದಲೆಯಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಹೋಗಿದ್ದ ಮಹಿಳೆ ನಾಪತ್ತೆ

ಮೂಡುಬಿದಿರೆ: ತಾಲೂಕಿನ ಕಡಂದಲೆಯಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಸೆ.10 ರಂದು ನಡೆದಿದೆ.

ಕಡಂದಲೆ ಗ್ರಾಮದ ಪೂಪಾಡಿಕಲ್ಲಿನ ಪವಿತ್ರಾ(29) ನಾಪತ್ತೆಯಾದ ಮಹಿಳೆಯಾಗಿದ್ದಾರೆ. ಇವರು ಕಳೆದ 9 ವರ್ಷಗಳ ಹಿಂದೆ ಗಣೇಶ್ ಎಂಬವರನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ.

ಬುಧವಾರ ಬೆಳಗ್ಗೆ ತನ್ನ ಮಗ ಹಾಗೂ ತಂಗಿಯ ಮಗನನ್ನು ಕಡಂದಲೆ ವಿದ್ಯಾಗಿರಿ ಶಾಲೆಗೆ ಬಿಡಲು ಹೋಗಿದ್ದು, ಬಳಿಕ ಮನೆಗೆ ಹಿಂದುರುಗಿಲ್ಲ. ಬೆಳಗ್ಗೆ 11.30ರ ವೇಳೆಗೆ ಆಕೆಯ ತಂಗಿ, ತಂದೆಗೆ ಕಾಲ್ ಮಾಡಿದ್ದು ಅಕ್ಕನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದ್ದಾಳೆ. ಮನೆಯವರು ಸಂಜೆಯವರೆಗೆ ಬರುತ್ತಾಳೆ ಎಂದು ಕಾದರೂ, ಬಳಿಕ ಅಸುಪಾಸಿನಲ್ಲಿವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ, ಯಾವುದೇ ಸುಳಿವು ಸಿಗಲಿಲ್ಲ. ಗುರುವಾರ ಬೆಳಿಗ್ಗೆ ಪವಿತ್ರಾಳ ತಂದೆ ಕೇಶವ ಶೆಟ್ಟಿಗಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಹರೆ: 5.5 ಅಡಿ ಎತ್ತರ, ಕೋಲು ಮುಖ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತುಳು ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾಗುವ ಸಂದರ್ಭ ಕೇಸರಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಮಹಿಳೆಯ ಕುರಿತು ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಯ ಮೊ. ಸಂಖ್ಯೆ 9480802314 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *